Skip to main content

Posts

Featured

ಕೇರಳದ ಆನೆ ಸಾವಿನ ಕಾಂಟ್ರಾವರ್ಸಿಗಳು ಮತ್ತು ಕಾನ್‌ಸ್ಪಿರಸಿ ಥಿಯರಿಗಳು

ಒಂದೇ ದಿನ, ಒಂದೇ ವಿಷಯದ ಕುರಿತು ಎರಡು ಲೇಖನ ಪ್ರಕಟಿಸುವ ದರ್ದು ನನಗೇನಿತ್ತು? ಗೊತ್ತಿಲ್ಲ. ಕೆಲ ವಿಷಯಗಳನ್ನು ಕೇಳಿ, ಓದಿ ನಗು ಬಂತು. ಆ ವಿಷಯಗಳ ಜೊತೆಗೆ ಒಂದಿಷ್ಟು ಗಂಭೀರ ವಿಷಯಗಳಿವೆ. ಹೇಳುವ ಇಚ್ಛೆ ಬಂದಿದ್ದರ ಪರಿಣಾಮ ಈ ಬರೆಹ. ಕೇರಳದ ಗರ್ಭಿಣಿ ಆನೆಯ ಸಾವಿನ ಕುರಿತು ಮಜಮಜಾ ವಿಷಯಗಳು ಹಿಂದಿನ ಲೇಖನದ ನಂತರ ತಿಳಿಯಿತು. ನಾ ಕೇಳಿದ ಕೆಲ conspiracy theoryಗಳು ಹೀಗಿವೆ:  ೧. ಇಡೀ ದೇಶ ಕೊರೊನಾದಿಂದ ಬಳಲಿ ಸರ್ಕಾರಗಳು ಬೆಂಡಾಗಿದ್ದರೆ, ಕೇರಳ ಕೊರೊನಾವನ್ನು ಬಗ್ಗಿಸಿದೆ. ಅದನ್ನು ಸಹಿಸದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಕೇರಳದ ಹೆಸರು ಕೆಡಿಸಲು ಆನೆ ಸಾವಿನ ಕುತಂತ್ರ ರಚಿಸಿವೆ. ೨. ಕೊರೊನಾ ಕತೆ ಸೇಮ್. ಲಾಕ್‌ಡೌನ್ ಸಡಿಲಗೊಳಿಸಿದ ಮೇಲೆ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿರೋದ್ರಿಂದ ಬಿಜೆಪಿ ಕೇರಳದಲ್ಲಿ ಸತ್ತ ಆನೆಯನ್ನ ನ್ಯಾಶನಲ್ ಇಶ್ಯೂ ಮಾಡುತ್ತಿದೆ. ೩. ದಕ್ಷಿಣ ಭಾರತೀಯರ ಮೇಲೆ ಮೊದಲಿನಿಂದಲೂ ಅನ್ಯಾಯವಾಗ್ತಿದೆ. ಹಿಂದಿನ ವರ್ಷ ವಿಶ್ವ ಹುಲಿ ದಿನಾಚರಣೆಯಂದೇ ಉತ್ತರಪ್ರದೇಶ ರಾಜ್ಯದಲ್ಲಿ ಹುಲಿಯೊಂದನ್ನು ಕೊಲ್ಲಲಾಗಿತ್ತು. ಈಗ ವಿಶ್ವ ಪರಿಸರ ದಿನ ಮುನ್ನಾದಿನ ಕೇರಳದಲ್ಲಿ ಆನೆ ಸಾವಿಗೀಡಾಗಿದೆ. ಹುಲಿ ಅಳಿವಿನಂಚಿನ ಜೀವಿಯಾದರೂ ಅದರ ಹತ್ಯೆ ರಾಷ್ಟ್ರೀಯ ಸುದ್ದಿಯಾಗಲಿಲ್ಲ‌. ಆದರೆ ಕೇರಳದಲ್ಲಿ ಆನೆ ಸತ್ತಿದ್ದನ್ನು ರಾಷ್ಟ್ರೀಯ ಸುದ್ದಿಯನ್ನಾಗಿಸಿದ್ದರ ಹಿಂದೆ ದಕ್ಷಿಣ ಭಾರತವನ್ನು ಕೆಳಮಟ್ಟದ ಬುದ್ಧಿಯುಳ್ಳವರ ನಾಡನ್ನಾಗಿ ಬಿಂಬಿಸಲ...

Latest posts

ಗರ್ಭಿಣಿ ಆನೆಯ ಕೊಲೆ ಮತ್ತು ಅನಾಗರಿಕ ಸಂತತಿ